ಪ್ರತಿ ಪಾಠ ಓದುವಾಗ, ನಾನು ವಿದ್ಯಾರ್ಥಿಯೇ ಆಗಿಬಿಡುತ್ತಿದೆ!

Mithun BN is an enthusiastic teacher, working as assistant professor at Christ University, Bengaluru. He has been our long standing volunteer and is actively involved in proofreading and providing managerial support as needed. Here is his piece of heart that drives him to work!

ಕನ್ನಡದ ಯಾವುದಾದರು ಸಣ್ಣ ಕಾಗದ ಕಂಡರು ತೆಗೆದುಕೊಂಡು ಓದುವ ನನಗೆ, ವಾಟ್ಸಪ್ ನ ಗುಂಪೊಂದರಲ್ಲಿ ಒಮ್ಮೆ ಬಂದ "ಚೆನ್ನಾಗಿ ಕನ್ನಡ ಬಲ್ಲವರು ಬೇಕು" ಎನ್ನುವ ಮೆಸೇಜ್ ಅತ್ತ ಗಮನಿಸುವಂತೆ ಮಾಡಿತ್ತು. ಅದೇನೆಂದು ನೋಡಿದಾಗ ಹತ್ತನೇ ತರಗತಿಯ ಕನ್ನಡ ಮಾಧ್ಯಮದ ಪುಸ್ತಕಗಳ ಪ್ರೂಫ್ ರೀಡಿಂಗ್ ಗೆ ಕನ್ನಡ ಗೊತ್ತಿರುವವರು ಬೇಕು ಎಂದಿತ್ತು. ಸರಿ, ಇದೇನು ನೋಡೋಣವೆಂದು ಅಲ್ಲಿ ಕೊಟ್ಟಿದ್ದ Facebook  ಲಿಂಕ್ ಮೇಲೆ ಕ್ಲಿಕ್ಕಿಸಿದಾಗ ಈ ಕೆಲಸವನ್ನು ಮಾಡುತ್ತಿರುವ ಗುಂಪು - "ಕನ್ನಡ ಪುಸ್ತಕ"ವೆಂದು ಗೊತ್ತಾಯಿತು. ನಾನು ಇದಕ್ಕೆ ಸೇರಬೇಕೆಂದು ವಿನಂತಿಸಿ ನನ್ನ ಮೇಲ್ ಐಡಿಯನ್ನು ಕೊಟ್ಟು ಸುಮ್ಮನಾಗಿದ್ದೆ. 2 ದಿನಗಳಲ್ಲಿ ಅತ್ತ ಕಡೆಯಿಂದ ಒಂದು ಮೇಲ್ ಬಂದಿತ್ತು. ಆಗ ನನಗೆ ತಿಳಿದದ್ದು ಏನೆಂದರೆ, ಹತ್ತನೇ ತರಗತಿಯ ಕನ್ನಡ ಮಾಧ್ಯಮದ ಪುಸ್ತಕಗಳು ಸಾಫ್ಟ್ವೇರ್ ನೆರವಿನಿಂದ ಪಿ.ಡಿ.ಎಫ್. ಫಾರ್ಮಾಟಿನಿಂದ  ಯೂನಿಕೋಡ್ ಗೆ ಬದಲಾಗಿದೆ ಹಾಗು ಅದು ಗೂಗಲ್ ಡಾಕ್ ನಲ್ಲಿದೆ, ಅದನ್ನು ಪ್ರೂಫ್ ರೀಡ್ ಮಾಡಬೇಕಾದ್ದು ನಮ್ಮ ಕೆಲಸವೆಂದು ತಿಳಿಯಿತು.  ಸರಿ ಮಾಡುತ್ತೇನೆಂದು ಒಪ್ಪಿಗೆ ಸೂಚಿಸಿ ಅವರಿಗೆ ಮಾರುತ್ತರಿಸಿದಾಗ, ಅವ್ರು  ಕನ್ನಡದ ಬಗೆಗೆ ತಿಳಿಯಲು ಒಂದು ಸಣ್ಣ ಪರೀಕ್ಷೆಯನ್ನೇ ಮಾಡಿದರು. ಅದಕ್ಕೆ ಸರಿಯಾಗಿ ಉತ್ತರಿಸಿದ ಬಳಿಕ ಸಹನಾ ಅವರು "ನೀವೊಂದು ಸ್ಯಾಂಪಲ್ ಫೈಲ್ ನ ಪ್ರೂಫ್ ರೀಡ್ ಮಾಡಿ ಕೊಡಿ" ಅಂತ ಮೇಲ್ ಕಳುಹಿಸಿದರು.  ಅದಕ್ಕೆ ನಾನು ಸ್ಯಾಂಪಲ್ ಎಲ್ಲ ಏನು ಬೇಡ ನೀವು ಫೈಲ್ ಕಳಿಸಿ ನಾನು ಪ್ರೂಫ್ ರೀಡ್ ಮಾಡುತ್ತೇನೆ ಎಂದಾಗ ಅವರು ಕಳಿಸಿದ್ರು.

ಮೊದಲೆರಡು ಪಾಠಗಳು ೧೦ ನೇ ತರಗತಿಯ ಕನ್ನಡ ಪಠ್ಯಪುಸ್ತಕದ್ದು. ಓದಲು ಖುಷಿಯಾಯಿತು. ಹೀಗೆ ಮುಂದುವರೆದಾಗ ಹಲವು ಚಾಪ್ಟರ್ಗಳ ಪ್ರೂಫ್ ರೀಡ್ ಮಾಡಿದೆ. ಇದನ್ನು ಮಾಡುವಾಗ ಆದ ಖುಷಿಯನ್ನು ಪದಗಳಲ್ಲಿ ಹೇಳಲು ಆಗುವುದಿಲ್ಲ.

ಪ್ರತಿ ಪಾಠ ಓದುವಾಗ, ನಾನು ಹತ್ತನೇ ತರಗತಿಯ ವಿದ್ಯಾರ್ಥಿಯೇ ಆಗಿಬಿಡುತ್ತಿದೆ ಮನಸ್ಸಿಗೆ ತುಂಬಾ ಸಂತಸ ಕೊಡುತಿತ್ತು. ಶಾಲೆಯ ನೆನಪೆಲ್ಲ ಮರುಕಳಿಸುತ್ತಿತ್ತು.

ಅದೇ ರೀತಿ ಇತಿಹಾಸದ ಪಾಠಗಳನ್ನು ಓದುವಾಗ ನಮ್ಮ ನಾಡಿನ ಹಿರಿಮೆ ಗರಿಮೆಗಳನ್ನು ತಿಳಿದು ಮೈ ಪುಳಕಿತವಾಗುತಿತ್ತು. ಹಾಗಾಗಿ ನನ್ನ ಬಿಡುವಿನ ಸಮಯದ ಬಹುಪಾಲು ಸಮಯವನ್ನು ಈ ಕೆಲಸಕ್ಕೆ ಮೀಸಲಾಗಿಸುತ್ತಿದ್ದೆ. ಎಷ್ಟೋ ಬರಿ ರಾತ್ರಿ ೧ ರ ವರೆಗೆ ಮತ್ತು ಬೆಳಿಗ್ಗೆ ೪ ರಿಂದ  ಶುರು ಮಾಡಿದ್ದೂ ಇದೆ.

ಈ ನಡುವೆ ಒಮ್ಮೆ ರಾಕೇಶ್ ಅವರು ಈ ಕೆಲಸಕ್ಕೆ ಸಹಕರಿಸಿದ ಎಲ್ಲ ವಾಲಂಟೀರ್ ಗಳ ಕೆಲಸವನ್ನ ಗ್ರಾಫ್ ಮೂಲಕ ರೆಡಿ ಮಾಡಿ ಗುಂಪಿನಲ್ಲಿ ಹಾಕಿದ್ದರು. ಅದರಲ್ಲಿ ನನ್ನ ಹೆಸರು ಎರಡನೇ ಸ್ಥಾನದಲ್ಲಿ ಇತ್ತು. ಅದನ್ನು ನೋಡಿ ತುಂಬಾ ಖುಷಿ ಆಗಿತ್ತು. ಇನ್ನು ಹೆಚ್ಚು ಸಮಯ ಇದಕ್ಕೆ ಮೀಸಲಿಡೋಣ ಅಂತ ಹಾಗೆ ಮಾಡುತ್ತ ಹೋದೆ. ೧೦ ನೇ ತರಗತಿ ಮುಗಿದು, ೨ ನೇ ಪಿ.ಯು.ಸಿ. ಪಾಠಗಳು ಶುರುವಾದಾಗ ನನ್ನ ಕನ್ನಡದ ಜ್ಞಾನ ಹೆಚ್ಚುತ್ತಾ ಹೋಯಿತು, ಒಂದೊಂದು ಪಾಠ ಪ್ರೂಫ್ ರೀಡ್ ಮಾಡಿದಾಗಲೂ ಒಂದೊಂದು ರೀತಿಯ ಹೊಸ ಅನುಭವ.  ಸದ್ಯ ಈ ನಡುವೆ ನನ್ನ ಕೆಲಸದ ಒತ್ತಡದಿಂದ ಇದರಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲವಲ್ಲ ಎಂಬ ಬೇಸರಿವಿದೆ. 

ಈ ಕೆಲಸದಲ್ಲಿ ನನ್ನನ್ನು ಸೇರಿಸಿಕೊಂಡ ಶ್ರೀ ರಾಕೇಶ್ ಅವರಿಗೂ ಮತ್ತು ಸಹನಾ ಅವರಿಗೆ ನನ್ನ ಮನದಾಳದ ನನ್ನೀ.