The team works round the clock!

ವನಿತಾರವರು ನಮ್ಮ ಪ್ರೂಫ್ರೀಡಿಂಗ್ ಪ್ರಾರಾರಂಭದ ದಿನಗಳಿಂದಲೂ ತೊಡಗಿಸಿಕೊಂಡ ಸಕ್ರಿಯ ಸ್ವಯಂಸೇವಕರು. ಉಪಕ್ರಮದ ಆರಂಭಿಕ ದಿನಗಳಲ್ಲಿ ನಮ್ಮ ವಾಟ್ಸಪ್ಪ್ ಗುಂಪಿಗೆ ಕಳುಹಿಸಿದ ಧ್ವನಿ ಸಂದೇಶದ ಪ್ರತಿಲಿಪಿ:

"ಕನ್ನಡ-ಪುಸ್ತಕ ಪ್ರಾಜೆಕ್ಟ್ ನ ಕಾನ್ಸೆಪ್ಟ್ ಮೊದಲು ನನಗೆ ತಿಳಿದಾಗ ತುಂಬಾನೇ ಖುಷಿಯಾಯಿತು. ಇದು ನನಗೆ ಮೊದಲು ಗೊತ್ತಾಗಿದ್ದು ಅವಿರತ ತಂಡದ ರಾಧಿಕಾ ಮತ್ತು ರವಿಕುಮಾರ್ ರವರಿಂದ.  ಆದರೆ ಇದರಲ್ಲಿ ನಾನು ಎಷ್ಟು ನನ್ನನ್ನ ನಾನು  ತೊಡಗಿಸಿಕೊಳ್ಳಬಲ್ಲೆ, ಅಥವಾಎಷ್ಟು ಕಾಂಟ್ರಿಬ್ಯೂಟ್ ಮಾಡಬಲ್ಲೆ ಅಂತ ಸ್ವಲ್ಪ ಸಂದೇಹದಲ್ಲಿ ಇದ್ದೆ. ಬಟ್ ಚಾಪ್ಟರ್ ವೈಸ್ ಕೆಲಸವನ್ನ ಅಸೈನ್ ಮಾಡಿ, ರಾತ್ರಿ ಹಗಲು ಅನ್ನದೆ ನಮಗೆಲ್ಲಾ ಗೈಡ್ ಮಾಡಿದ ಸಹನಾ, ಪೂಜಾ, ಹರೀಶ್, ರಾಕೇಶ್, ರವಿಕುಮಾರ ಎಲ್ಲರಿಗೂ ನನ್ನ ಕಡೆಯಿಂದ ವಿಶೇಷವಾಗಿ ಧನ್ಯವಾದಗಳು, 

ಎಂ. ಡಿ. ಪಲ್ಲವಿಯವರು ನಮ್ಮ ತಂಡದೊಂದಿಗೆ ಸೇರಿ, ಅವರೂ ಒಬ್ಬರು ವಾಲಂಟೀರ್ ಆಗಿ ಧ್ವನಿ ನೀಡಿದ್ದಕ್ಕೆ, ಅವರಿಗೂ ಕೂಡ ವಿಶೇಷವಾದ ಧನ್ಯವಾದಗಳು.  

ಇದು ನಾವೆಲ್ಲಾ ಸೇರಿ ಮಾಡಿದತಹ ಒಂದು ತಂಡದ ದೊಡ್ಡ ಕೆಲಸ, ಉತ್ತಮ ಕೆಲಸ - ಒಂದು ದೊಡ್ಡ ಸಾಧನೆ ಕೂಡ. ಇದರಿಂದ ಸಮಾಜಕ್ಕೆ ಮತ್ತಷ್ಟು ಒಳಿತಾಗಲಿ, ಈ ಉತ್ತಮ ಕೆಲಸದಿಂದ ಸಮಾಜಕ್ಕೆ ಮತ್ತಷ್ಟು ಪ್ರಯೋಜನವಾಗಲಿ ಅಂತ ಆಶಿಸ್ತಾಇದೀನಿ"